ಆಧುನಿಕ ಭಾರತದಲ್ಲಿ ಪ್ರಾಚೀನ ಸಂಸ್ಕೃತ ವಾಙ್ಮಯದ ಕೊಡುಗೆ ಮತ್ತು ಅನ್ವಯಗಳು - ಸಂಸ್ಕೃತ ಮತ್ತು ಕೃಷಿ

Main Article Content

ದಿವ್ಯಶ್ರೀ ಜಗದೀಶ ಪೈ ಬಿ.
ಭಾಸ್ಕರ ವಿ ಭಟ್

Abstract

ಭಾರತ ಒಂದು ಕೃಷಿ ರಾಷ್ಟ್ರ; ರೈತ ದೇಶದ ಬೆನ್ನೆಲುಬು ಮತ್ತು ಅಡಿಪಾಯ. ಪ್ರಾಚೀನ ವೈದಿಕ ಕಾಲದಿಂದಲೂ ಭಾರತೀಯರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿ ಮಾನವನ ಜೀವನೋಪಾಯದ ಪ್ರಮುಖ ಸಾಧನವಾಗಿದೆ.ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾಸ,ಗ್ರಹ,ತಿಥಿ,ನಕ್ಷತ್ರ, ವಾಯು,ಮುಹೂರ್ತ - ಇವುಗಳ ಆಧಾರದಲ್ಲಿ ಮಳೆಯ ಗಣನೆಯನ್ನು ಕರಾರುವಕ್ಕಾಗಿ ನಿರ್ಧರಿಸುವ ಬಗೆಯನ್ನು ತಿಳಿಸಿದ್ದಾರೆ.ಅನೇಕ ಗ್ರಂಥಗಳಲ್ಲಿ ಈ ಬಗ್ಗೆ ಉಲ್ಲೇಖಗಳನ್ನು ಉದಾಹರಿಸಲಾಗಿದೆ. ಕೃಷಿಗೆ ಅಗತ್ಯವಿರುವ ಮಳೆ -ಯಾಕೆ,ಯಾವಾಗ,ಹೇಗೆ ಉಂಟಾಗುತ್ತದೆ ಹಾಗೂ ಅದರ ಕಾರಣವನ್ನು ಮತ್ತು ಇಂದಿಗೆ ಅದರ ಅನ್ವಯವನ್ನು ಪರಾಶರ ಋಷಿಗಳು ಬರೆದ ಕೃಷಿಪರಾಶರ  ಗ್ರಂಥದ ಆಧಾರದಲ್ಲಿ ಕಂಡುಕೊಳ್ಳುವ ಪ್ರಯತ್ನವನ್ನು ಪ್ರಸ್ತುತ ಲೇಖನದಲ್ಲಿ ಮಾಡಲಾಗಿದೆ.

Article Details

How to Cite
ದಿವ್ಯಶ್ರೀ ಜಗದೀಶ ಪೈ ಬಿ., & ಭಾಸ್ಕರ ವಿ ಭಟ್. (2024). ಆಧುನಿಕ ಭಾರತದಲ್ಲಿ ಪ್ರಾಚೀನ ಸಂಸ್ಕೃತ ವಾಙ್ಮಯದ ಕೊಡುಗೆ ಮತ್ತು ಅನ್ವಯಗಳು - ಸಂಸ್ಕೃತ ಮತ್ತು ಕೃಷಿ. International Journal of Philosophy and Languages (IJPL), 3(1), 51–58. https://doi.org/10.47992/IJPL.2583.9934.0028
Section
Articles