ಹಾಸ್ಯ ಲೋಕ ಸ್ವರ್ಗ ಸುಖ (ನಕ್ಕರೆ ಅದೇ ಸ್ವರ್ಗ)

Main Article Content

ಕವಿತಾ ಆರ್.
ರಾಜಶೇಖರ ಜಮದಂಡಿ

Abstract

ಉದ್ದೇಶ: ಹಾಸ್ಯ ಬರೀ ಸಂತಸವನ್ನು ನೀಡುವುದಲ್ಲ. ಹಾಸ್ಯ ಪರಸ್ಪರ ಆತ್ಮೀಯತೆಯನ್ನು ಆಸ್ವಾದಿಸುವುದಕ್ಕೆ ಇರುವ ಒಂದು ಶಕ್ತಿ. ಹಣದಿಂದ ಒಬ್ಬ ವ್ಯಕ್ತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಹಾಸ್ಯದಿಂದ / ನಗುವಿನಿಂದ ವ್ಯಕ್ತಿಯನ್ನು ಗೆಲ್ಲಲು ಸಾಧ್ಯ ಮತ್ತು ದೃಢವಾಗಿ ನಿಲ್ಲಲು ಸಾಧ್ಯ.


ಪ್ರೀತಿ ಮತ್ತು ನಗು ಎಷ್ಟು ಚಿಕ್ಕ ಪದ. ಆದರೆ ಆ ಪದಗಳಿಗೆ ಇಡೀ ಜಗತ್ತನ್ನು ಗೆಲ್ಲುವ ಶಕ್ತಿ ಇದೆ. ನಗು ಇರುವ ಕಡೆ ಪ್ರೀತಿ ಬೆಳೆಯುತ್ತೆ. ಪ್ರೀತಿ ಬೆಳೆದ ಕಡೆ ನಗು ತುಂಬಿರುತ್ತೆ.


ಹಾಸ್ಯ ಪ್ರಜ್ಞೆಯನ್ನು ಎಲ್ಲರನ್ನು ಮೂಡಿಸಿ ನಗು-ನಗುತ್ತಾ ಇರುವಂತೆ ಮಾಡುವುದೇ ಇದರ ಉದ್ದೇಶ. ಅಷ್ಟೇ ಅಲ್ಲ ಇತರರ ಗಮನವನ್ನು ಆಕರ್ಷಿಸುವುದು. ಸಾಮರಸ್ಯವನ್ನು ಸೃಷ್ಟಿಸುವುದು. ಸಂದೇಶವನ್ನು ಸ್ಮರಣಾರ್ಹವಾಗಿ ಪರಿವರ್ತಿಸುವುದು. ಉದ್ವೇಗ, ಉದ್ರೇಕಗಳನ್ನು ಉಪಶಮನ ಮಾಡುವುದು. ಸಂಬಂಧಗಳ ನಿಕಟತೆಯನ್ನು ಹೆಚ್ಚಿಸುವುದು ಹಾಗೂ ಇತರ ಕಾರ್ಯವಿಧಾನಗಳು ಅಯಶಸ್ವಿಯಾದಾಗ ವಿವಾದ ವೈಷಮ್ಯಗಳನ್ನು ಪರಿಹರಿಸುವುದು.


ನಮ್ಮ ಜೀವನದಲ್ಲಿ ನಾವೆಲ್ಲರೂ ಹುಟ್ಟದ ಮೇಲೆ ಸಾಯಲೇಬೇಕು. ಸಾಯೋದೊಳಗೆ ಏನಾದರೂ ಸಾಧನೆ ಮಾಡಬೇಕು. ಆ ಸಾಧನೆ ನಮ್ಮ ಜೀವನದಲ್ಲಿ ಕಷ್ಟ ಬರಲಿ, ಸುಖಬರಲಿ, ನಗ್ತಾ ಇರಬೇಕು. ನಗಿಸ್ತಾ ಇರಬೇಕು ಅನ್ನೋದು ಹಾಸ್ಯದ ಪ್ರಮುಖ ಉದ್ದೇಶ.


ನಗುವನ್ನು ಅಟ್ಟಿ ಬದುಕಿದರೆ ಜೀವನ ತುಟ್ಟಿ


ನಗುವನ್ನು ಮೆಟ್ಟಿ ಬದುಕಿದರೆ ಜೀವನ ಗಟ್ಟಿ


ನಗುವನ್ನು ಬಿಟ್ಟು ಬದುಕಿದರೆ ಜೀವನ ಬಿಟ್ಟ


ನಗುವನ್ನು ಗಟ್ಟಿ ಹಿಡಿದು ಹಂಚಿ ಬದುಕಿದರೆ ಸ್ವರ್ಗ ಸೃಷ್ಟಿ.


ನಗ್ತಾ ಇದ್ರೆ ಆಯಸ್ಸು ಜಾಸ್ತಿಯಂತೆ


ನಗದೇ ಇರೋರಿಗೆ ಹೇಳೋಕಾಗಲ್ವಂತೆ


"ಬದುಕಿನಲ್ಲಿ – ಬದುಕಿ – ನಲಿ"


ಇಂತಹ ಸಣ್ಣ ಸಣ್ಣ ಮಾತಿನಲ್ಲೂ ನಗುವಿನ ಜೊತೆ ನಗ್ನ ಸತ್ಯ ಕೂಡ ತಿಳಿಸಿ ಎಲ್ಲರನ್ನು ಮನವರಿಕೆ ಮಾಡುವ ಒಂದು ಪ್ರಯತ್ನವೂ ಆಗಿದೆ & ಪ್ರಮುಖ ಉದ್ದೇಶವೂ ಆಗಿದೆ.


ವಿಧಾನ: (೧) ನಾಟಕಗಳಿಂದ ಹಾಸ್ಯ. (೨) ಸಿನಿಮಾಗಳಿಂದ ಹಾಸ್ಯ. (೩) ಭಾಷಣದಿಂದ ಹಾಸ್ಯ (೪) ಅಭಿನಯದಿಂದ ಹಾಸ್ಯ. (೫) ಹನಿಗವನಗಳಿಂದ ಹಾಸ್ಯ (೬) ಹಾಡಿನ ಮೂಲಕ ಹಾಸ್ಯ.


(೭) ನೃತ್ಯದ ಮೂಲಕ ಹಾಸ್ಯ. (೮) ಚಿತ್ರಕಲೆಯ ಮೂಲಕ ಹಾಸ್ಯ. (೯) ಮಿಮಿಕ್ರಿಗಳಿಂದ ಹಾಸ್ಯ. (೧೦) ದಿನನಿತ್ಯ ಸಂಸಾರದಲ್ಲಿ ಹಾಸ್ಯ. (೧೧) ಶಾಯರಿ ಮೂಲಕ ಹಾಸ್ಯ. (೧೨) ಚಟುವಟಿಕೆಗಳ ಮೂಲಕ ಹಾಸ್ಯ (ಬಲೂನ್-ಬಾಲ) (೧೩)ಏಕಪಾತ್ರಭಿನಯ ಮೂಲಕ ಹಾಸ್ಯ (೧೪) ಮನೋರಂಜನೆ ಕಾರ್ಯಕ್ರಮಗಳ ಮೂಲಕ ಹಾಸ್ಯ. (೧೫) ನಗೆ ಹಬ್ಬಗಳ ಮೂಲಕ ಹಾಸ್ಯ. (೧೬) ಮಾಧ್ಯಮಗಳ ಮೂಲಕ ಹಾಸ್ಯ. (೧೭) ಹಾಸ್ಯಮಯ ಕಥೆಗಳು (೧೮) ಹಾಸ್ಯ ಪ್ರಬಂಧಗಳು (೧೯) ಹಾಸ್ಯ ಪತ್ರಿಕೆಗಳು.


ಲಿತಾಂಶ: ನಾವು ಬರೆಯುವ ಲೇಖನದ ಫಲಿತಾಂಶ ಪ್ರತಿಯೊಬ್ಬರಲ್ಲೂ ಪರಿವರ್ತಿಸುವ, ಪರಿಪಕ್ವತೆ ನಗು ಕಾಣಲು ಬಯಸುತ್ತೇನೆ. ಯಾಕೆಂದರೆ ಕಷ್ಟ ಬರುತ್ತೆ ಹೋಗುತ್ತೆ ಹಣ ಬರುತ್ತೆ-ಹೋಗುತ್ತೆ. ಆಸ್ತಿ ಬರುತ್ತೆ-ಹೋಗುತ್ತೆ ಆದ್ರೆ ಹೊಟ್ಟೆ ಮಾತ್ರ ಬರುತ್ತೆ, ಹೋಗೋದೇ ಇಲ್ಲ. ತಲೆ ಕೂದಲು ಹೋಗುತ್ತೆ ಬರೋದೇ ಇಲ್ಲ. ಈ ಹೋಗುತ್ತೆ-ಬರುತ್ತೆ ಅನ್ನೊದ್ರು ಮಧ್ಯೆ ಇರುತ್ತೆ ಅನ್ನೋದಾದ್ರೆ ಅದು ನಮ್ಮ-ನಿಮ್ಮ ಸ್ನೇಹ, ಭಾಂದವ್ಯ ತಿ.ತಿ. ನಗು. ಇದನ್ನು ಓದಿದ ಒಂದಿಷ್ಟು ಜನರಾದರೂ ದ್ವೇಷಗಳನ್ನು ಬಿಟ್ಟು ಪ್ರೀತಿಸುವಂತಾಗಲಿ, ನಗುತ್ತಾ-ನಗಿಸುವಂತರಾಗಲಿ ಎಂಬುದೇ ನನ್ನ ಮಹಾದಾಶೆ,


ಮೌಲ್ಯ: ಹಾಸ್ಯ-ನಗು ಬರೀ ಆನಂದ ಮಾತ್ರ ಕೊಡುವುದಿಲ್ಲ. ಕೆಲವು ಅನುಭವಗಳನ್ನು ನೀಡುತ್ತೆ, ಆ ಅನುಭವದಿಂದ “ನಾವು ಎಷ್ಟು ಓದಿದ್ದೇವೆ ಎಂಬುದು ಮುಖ್ಯವಲ್ಲ. ನಮ್ಮ ಓದು ಎಷ್ಟು ಸಂಸ್ಕಾರವನ್ನು ಕಲಿಸಿದೆ ಎಂಬುದು ಮುಖ್ಯ” ಎಂದು ಡಾ|| ಅಬ್ದುಲ್ ಖಲಂರವರು ಹೇಳಿದ್ದಾರೆ.


ನಮ್ಮ ಹಾಸ್ಯ ಇನ್ನೊಬ್ಬರಿಗೆ ನೋವುನ್ನುಂಟು ಮಾಡುವಂತಿರಬಾರದು. ಬದಲಾಗಿ ಕಷ್ಟಗಳನ್ನು ಮರೆತು. ಸಂಭ್ರಮಿಸುವ ವಾತವರಣಕ್ಕೆ ತರಬೇಕೆಂಬುದೇ ನನ್ನ ಧೈಯ


ಪ್ರಕಾರ: ಪರಿಕಲ್ಪನಾ ಸಂಶೋಧನಾ

Article Details

How to Cite
ಕವಿತಾ ಆರ್., & ರಾಜಶೇಖರ ಜಮದಂಡಿ. (2023). ಹಾಸ್ಯ ಲೋಕ ಸ್ವರ್ಗ ಸುಖ (ನಕ್ಕರೆ ಅದೇ ಸ್ವರ್ಗ). International Journal of Philosophy and Languages (IJPL), 2(1), 48–52. https://doi.org/10.47992/IJPL.2583.9934.0013
Section
Articles