ಕನ್ನಡಕೊಬ್ಬರೆ ಕಿಟೆಲ್
Main Article Content
Abstract
ಉದ್ದೇಶ: ಕನ್ನಡ ನಾಡು ನುಡಿ ಬಗ್ಗೆ ಹಲಾವಾರು ಜನ ಹಲವಾರು ರೀತಿಯಲ್ಲಿ ತಿಳಿಸಿದ್ದಾರೆ. ಆದರೆ ಕನ್ನಡಿಗರಲ್ಲದ, ಕನ್ನಡ ಬಾರದ ಮಹಾನೀಯರೊಬ್ಬರು ಕನ್ನಡಕ್ಕಾಗಿ ತನು ಮನವನ್ನು ಅರ್ಪಿಸಿ, ಕನ್ನಡವೇ ನನ್ನ ಉಸಿರು, ಕನ್ನಡಕ್ಕಾಗಿಯೇ ತಾನು ಜನಿಸಿದ್ದೇನೆ ಎಂದು ಭಾವಿಸಿ, ಕನ್ನಡದ ಹಲವಾರು ಹಲವಾರು ವಿಷಯಗಳನ್ನು ವಿಶ್ವದಾದ್ಯಂತ ತಿಳಿಸಿ ಕನ್ನಡಕ್ಕೆ, ಕನ್ನಡ ಭಾಷೆಗೆ ಎರಡನೇ ಪಿ ಹೆಚ್ಡಿ ತಂದುಕೊಟ್ಟವರು ಕಿಟೆಲ್ರು.
ಇವತ್ತಿನ ದಿನ ಕನ್ನಡವನ್ನು “ನಾನು ಅಷ್ಟು ಎತ್ತರಕ್ಕೆ ಕೊಂಡೋಯ್ದೆ” ಎಂದು ಬಡಾಯಿ ಕೊಚ್ಚಿಕೊಳ್ಳುವವರೆಲ್ಲರೂ ಒಮ್ಮೆ ಕಿಟೆಲ್ ಬಗ್ಗೆ ತಿಳಿದುಕೊಳ್ಳಬೇಕು. ನಾವು ಈ ನಾಡಿನಲ್ಲಿ ಜನಿಸಿದ್ದಕ್ಕೆ ನಮಗೆ ಇಷ್ಟು ಹೆಸರು ಬಂದಿದೆ. ನಮ್ಮ ಮೇಲೆ ಈ ನಾಡಿನ ಋಣ ಇದೆ. ಆದರೆ ಕಿಟೆಲ್ರು ಮಾಡಿದ ಸಾಧನೆಗೆ ಈ ನಾಡೆ ಅವರಿಗೆ ಋಣಿಯಾಗಿದೆ. ಊರಿಂದ ಊರಿಗೆ ಬಂದು ನಮ್ಮ ನಾಡಿನ ಬಗ್ಗೆ ಗೌರವವನ್ನು ತೋರಿಸಿ, ಇಲ್ಲಿ ನಮಗೆ ತಿಳಿಯದ ವಿಷಯವನ್ನು ತಿಳಿಸಿಕೊಟ್ಟು ನಮ್ಮ ನಾಡನ್ನು ನೂರಾರು ವರ್ಷಗಳ ಹಿಂದೆಯೇ ಜಗತ್ತಿಗೆ ಪರಿಚಯ ಮಾಡಿಸಿದ್ದಾರೆ. ಅದಕ್ಕಾಗಿ ಕನ್ನಡ ನಾಡು ಇರುವವರೆಗೂ ಕಿಟೆಲ್ ಅವರನ್ನು ಮರೆಯುವಂತಿಲ್ಲ. ಕಿಟೆಲ್ ಓರ್ವ ವ್ಯಕ್ತಿ ಮಾತ್ರವಲ್ಲ ಈ ನಾಡಿನ ಶಕ್ತಿ. ಈ ನಾಡು, ಭಾಷೆಗಾಗಿ ದುಡಿದು ಕನ್ನಡದ ಕಂಪನ್ನು ವಿಶ್ವದಾದ್ಯಂತ ಪಸರಿಸಿದ
ಮಹಾ ಚೇತನ. ನನ್ನ ಉದ್ದೇಶವಿಷ್ಠೇ ಈ ನನ್ನ ಕಿರುಲೇಖನವನ್ನು ಓದಿದ ಕೇಲವೇ ಕೆಲವು ಜನರಾದರೂ ಕಿಟೆಲ್ರ ಬಗ್ಗೆ ಗೌರವ ತೋರಿಸಿ ಇನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡುವ ಪ್ರಯತ್ನ ಮಾಡಲಿ ಎನ್ನುವುದಷ್ಟೇ.
ವಿಧಾನ: ೧) ಆಧುನಿಕ ಕನ್ನಡ ಸಾಹಿತ್ಯ ೨) ನವೋದಯ ಪೂರ್ವ ಕನ್ನಡ ಸಾಹಿತ್ಯ ೩) ಭಾಷೆನ್ ಮಿಷನರಿಗಳ ಕನ್ನಡ ಸಾಹಿತ್ಯ. ಸಾಮಾಜಿಕ ಜಾಲತಾಣ (Google Scholor) ಈ ರೀತಿಯ ದ್ವಿತೀಯ ದರ್ಜೆಯ ಡೇಟಾದ ಮೂಲಕ ಓದಿ ನಾನು ಈ ಲೇಖನವನ್ನು ಸಿದ್ಧ ಪಡಿಸಿದ್ದೇನೆ.
ಫಲಿತಾಂಶ: ನಾನು ಕಿಟೆಲ್ ಅವರ ಬಗ್ಗೆ ತಿಳಿದುಕೊಳ್ಳಲು ಶುರು ಮಾಡಿದಾಗ ಹಲವಾರು ಮಾಹಿತಿಗಳನ್ನು ನಾನು ತಿಳಯುತ್ತಾ ಹೋದೆ. ನಂತರದಲ್ಲಿ ಕಿಟೆಲ್ ಅವರ ಜೊತೆಗೆ ಇನ್ನೀತರ ಹುಟ್ಟುತ್ತಾ ಕನ್ನಡಿಗರಾಗಿ ಹುಟ್ಟದೇ ಕನ್ನಡಕ್ಕೆ ಕೊಡುಗೆ ನೀಡಿ ಕನ್ನಡಿಗರಾಗಿ ಕೊನೆ ಹುಸಿರು ಬಿಟ್ಟಂತಹ ಮಹಾನೀಯರ ಬಗ್ಗೆಯೂ ಅಧ್ಯಯನ ಮಾಡಲು ಅವಕಾಶ ದೊರಕಿತು.
ಮೌಲ್ಯ: ನಾನು ಕಿಟೆಲ್ ರ ಬಗ್ಗೆ ಅಧ್ಯಯನಿಸಲು ಆರಂಭಿಸಿದಾಗ ಅವರ ವ್ಯಕ್ತಿತ್ವ, ಅವರ ಕನ್ನಡದ ಮೇಲಿನ ಪ್ರೀತಿ, ಅವರು ಕನ್ನಡವನ್ನು ಕಲಿತ ರೀತಿ ಇವೆಲ್ಲವೂ ನನ್ನ ಕಣ್ಣಿನ ಮುಂದೆ ಗೋಚರಿಸುತ್ತಾ ಹೋಯಿತು. ನಂತರ ಒಂದು ಸನ್ನಿವೇಶದಲ್ಲಿ ಅವರು ತಮ್ಮ ನಾಡಿನಲ್ಲೂ ಸಹ ಕನ್ನಡಿಗರನ್ನು ಕಂಡರೆ ಕನ್ನಡದಲ್ಲಿಯೇ ಮಾತನಾಡಿಸುವ ನಿಷ್ಟೆ. ಅವರು ಕನ್ನಡದ ಮೇಲೆ ಇಟ್ಟಿದ್ದ ಗೌರವವನ್ನು ತೋರಿಸುತ್ತದೆ. ಇವೆಲ್ಲವೂ ನನ್ನಲ್ಲಿ ಕಿಟೆಲ್ ಬಗ್ಗೆ ಹೆಚ್ಚು ಗೌರವ ಉಂಟು ಮಾಡಿತು.
ಪ್ರಕಾರ: ಪರಿಕಲ್ಪನಾ ಸಂಶೋಧನೆ