ಅಳಿವಿನ ಅಂಚಿನಲ್ಲಿರುವ ರಂಗಭೂಮಿ (ಬಣ್ಣ ಮಾಸಿದ ಬದುಕು)

Main Article Content

ಶಿವರಾಜ್ ಜಿ.
ಡಾ. ರಾಜಶೇಖರ ಜಮದಂಡಿ

Abstract

ಉದ್ದೇಶ: ನಾಟಕ ಕೇವಲ ನಾಟಕ ಮಾತ್ರವಲ್ಲ, ಎಷ್ಠೋ ಜನರ ಬದುಕು, ನಾಟಕ ಎನ್ನುವುದು ಚರಿತ್ರೆ, ಅದೊಂದು ಕಲೆ, ಅದೊಂದು ಸಂಸ್ಕೃತಿಇಷ್ಠೆಲ್ಲವನ್ನು ಹೊಂದಿರುವತಹ ನಾಟಕ ಇಂದು ನಮ್ಮಿಂದ ದೂರವಾಗುತ್ತಿದೆ ಎನ್ನುವುದೇ ನೋವಿನ ಸಂಗತಿ. ಕೇವಲ ನನ್ನಿಂದ ಅಥವಾ ನನ್ನ ಲೇಖನದಿಂದ ಜಗತ್ತು ಬದಲಾವಣೆಯಾಗುತ್ತೆ ಎಂದು ನಾನೂ ಊಹಿಸುವುದಿಲ್ಲ. ಆದರೆ ನನ್ನ ಲೇಖನದಿಂದ ನಾಟಕ, ರಂಗಭೂಮಿ ಹಾಗೂ ರಂಗಕಲೆಗಳ ಮೇಲೆ ಗೌರವ ಹೆಚ್ಚಾದರೆ ಸಾಕು. ಇದರ ಜೊತೆಗೆ ನಾಟಕ ನೋಡುಗರ ಸಂಖ್ಯೆ, ಓದುಗರ ಸಂಖ್ಯೆ ಹೆಚ್ಚಾದರೆ ಸಾಕು ಎನ್ನುವುದೇ ನನ್ನ ಕಿರು ಲೇಖನದ ಉದ್ದೇಶಇದರ ಜೊತೆಯಲ್ಲಿ ನಮ್ಮಿಂದ ಹಲವಾರು ಕಲೆ ಸಂಸ್ಕೃತಿಗಳೂ ಕೂಡಾ ನಮ್ಮಿಂದ ದೂರಾ ಆಗುತ್ತಿರುವ ದಿನಗಳು ಸಮೀಪಿಸುತ್ತಿವೆ. ಹೀಗೆ ದಿನ ಕಳೆದರೆ ನಮ್ಮ ಮುಂದಿನ ಪೀಳಿಗೆಗೆ ಕೇವಲ ಕಥೆಗಳು, ಫೋಟೋ ಚಿತ್ರಗಳು ಮಾತ್ರ ಉಳಿಯುತ್ತವೆ ಹೊರತು ನೇರವಾಗಿ ನೋಡಲು ಆಗುವುದಿಲ್ಲ. ನಾಗರೀಕ ಪ್ರಪಂಚದಿಂದ ನಾಟಕ ಎಂಬ ಕಲೆ ಬಹುದೂರ ಸಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದರಿಂದ ನಾವು ಕೇವಲ ಒಂದು ಬಗೆಯ ಮನರಂಜನೆಯನ್ನು ಮಾತ್ರ ಕಳೆದುಕೊಳ್ಳುತ್ತಿಲ್ಲ. ಇದರಿಂದ ನಾವು ನಮ್ಮ ಚರಿತ್ರೆಯನ್ನೂ ಕೂಡಾ ಕಳೆದುಕೊಳ್ಳುತ್ತಿದ್ದೇವೆ, ಇತಿಹಾಸವನ್ನ ಕಳೆದುಕೊಳ್ಳುತ್ತಿದ್ದೇವೆ, ಪರಂಪರೆ, ಆಚಾರ, ವಿಚಾರಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಮರೆಯುವಂತಿಲ್ಲ. ರಂಗಭೂಮಿ ನಶಿಸಿಹೋದರೆ ಕೇವಲ ನಾಟಕ ಮಾತ್ರ ನಶಿಸಿಹೋಗುವುದಿಲ್ಲ ಜೊತೆಯಲ್ಲಿ ಒಳ್ಳೆ ಒಳ್ಳೆಯ ರಂಗ ಕರ್ಮಿಗಳು, ನಾಟಕ ರಚನೆಕಾರರು, ತಂತ್ರಜ್ಞಾನರು, ಹೀಗೆ ಹಲವಾರು ಬುದ್ಧಿವಂತ ಜೀವಿಗಳು ನಮ್ಮಿಂದ ದೂರವಾಗಿ ಹೋಗುತ್ತರೆ. ಈಗಾಗಲೇ ಹಲವಾರು ನಾಟಕ ಕಂಪನಿಗಳು ನಮ್ಮಿಂದ ದೂರ ಆಗಿರುವ ಉದಾಹರಣೆಗಳಿವೆ. ಕರ್ನಾಟಕದ ಪ್ರಮುಖ ನಾಟಕ ಕಂಪನಿ ಎಂದರೆ ಗುಬ್ಬಿ ಕಂಪನಿ ಅಂತಹ ದೊಡ್ಡ ಕಂಪನಿಯೇ ನಮ್ಮಿಂದ ದೂರ ಆಗುತ್ತಿರುವಾಗ ಅಂತಹ ಇನ್ನು ಹಲವಾರು ಸನ್ಣ ಸಣ್ಣ, ನಾಟಕ ಕಂಪನಿಗಳು ದೂರ ಆಗಿರುವ ಎಷ್ಠೋ ಉದಾಹರಣೆಗಳಿವೆ. ಅದರ ಜೊತೆಯಲ್ಲಿ ನಮ್ಮಲ್ಲಿ ಪ್ರಮುಖ ನಾಟಕ ಕಾರರು ಎಂದರೆ ಶ್ರೀರಂಗ, ಚದುರಂಗ, ಕೈಲಾಸಂ, ಕಾರ್ನಾಡರು, ಲಂಕೇಶ್ರಂತಹ ರಾಷ್ಟ್ರ ಪ್ರಶಸ್ತಿ ಪಡೆದಿರುವಂತಹ ನಾಟಕಕಾರರು ನಮ್ಮಲ್ಲಿ ಇದ್ದುದ್ದನ್ನು ನಾವು ಮರೆಯುವಂತಿಲ್ಲ.  


ವಿಧಾನ: ) ಪೌರಾಣಿಕ ನಾಟಕ ) ಸಾಮಾಜಿಕ ನಾಟಕ ) ರಾಜಕೀಯ ನಾಟಕ ) ಐತಿಹಾಸಿಕ ನಾಟಕ ) ಗಧ್ಯ ನಾಟಕ ) ಗೀತ ನಾಟಕ ) ಏಕಾಂಕ ನಾಟಕ  ) ಬೀದಿ ನಾಟಕ  ) ಬೀದಿ ನಾಟಕ ೧೦) ಪ್ರಹಸನ  ೧೧) ಯಕ್ಷಗಾನ


೧೨) ಹಾಸ್ಯ ನಾಟಕ []


ಫಲಿತಾಂಶ: ನನ್ನ ಲೇಖನದ ಫಲಿತಾಂಶ ತುಂಬಾ ಬದಲಾವಣೆಯನ್ನು ನಾನು ಎದುರು ನೋಡುತ್ತೇನೆ. ನನ್ನ ಲೇಖನದಿಂದ ಒಳ್ಳೆಯ ವಿಮರ್ಶೆಗಳು ಎದುರಾಗಲಿ, ಅಥವಾ ಕೆಟ್ಟ ವಿಮರ್ಶೆ ಎದುರಾಗಲಿ ಆದರೆ, ನಮ್ಮ ನಾಡಿನ ನಾಟಕ ಎಂಬ ಸಂಸ್ಕೃತಿ ಉಳಿಯಲಿ. ಇದನ್ನು ಓದಿದ ಕೆಲವಿಷ್ಠು ಮಂದಿ ಅದನ್ನು ಅರಿತರೆ ಅಷ್ಠೇ ಸಾಕು. ಯಾವುದೇ ಒಂದು ವಸ್ತುವನ್ನು ಎಲ್ಲರೂ ಇಷ್ಠ ಪಡಬೇಕು ಎನ್ನುವಂತಿಲ್ಲ, ಆದರೆ ಕೆಲವಿಷ್ಠು ಜನರಿಗೆ ಇಷ್ಠವಾದಾಗ ನಾಟಕಗಳ ಕಡೆ ಒಲವು ಹೆಚ್ಚಾಗಿ ಅದು ಬೆಳೆಯುವಲ್ಲಿ ಯಶಸ್ವಿಯಾದರೆ ಅಷ್ಠೆ ಸಾಕು.


ಮೌಲ್ಯ: ನಾಟಕಗಳಲ್ಲಿ ಎಲ್ಲಾ ರೀತಿಯ ಮೌಲ್ಯಗಳನ್ನು ಕೂಡಾ ನಾವು ಕಾಣಬಹುದು, ಒಳ್ಳೆಯದು, ಕೆಟ್ಟದ್ದು, ಹಾಸ್ಯ, ದುಃಖ, ವಿಧ ವಿಧ ತಂತ್ರಜ್ಞಾನ, ನೀತಿ.. ರೀತಿಯಾಗಿ ಇನ್ನೂ ಬೇರೆ ಬೇರೆ ಮೌಲ್ಯಗಳನ್ನು ನಮಗೆ ನಾಟಕದಲ್ಲಿ ಕಾಣಲು ಇರುತ್ತವೆ.


ಪ್ರಕಾರ: ಪರಿಕಲ್ಪನಾ ಸಂಶೋಧನಾ.

Article Details

How to Cite
ಶಿವರಾಜ್ ಜಿ., & ಡಾ. ರಾಜಶೇಖರ ಜಮದಂಡಿ. (2022). ಅಳಿವಿನ ಅಂಚಿನಲ್ಲಿರುವ ರಂಗಭೂಮಿ (ಬಣ್ಣ ಮಾಸಿದ ಬದುಕು). International Journal of Philosophy and Languages (IJPL), 1(1), 145–150. https://doi.org/10.47992/IJPL.2583.9934.0008
Section
Articles